ಕಾಡುತಿದೆ ನಿನ್ನೆಯ ದಿನವು
ಮಡಿಲಲಿ ಮಗುವಾದ ಆ ಕ್ಷಣವು
ಬೆಚ್ಚಗೆ ಮಲಗಿದೆ ಅಪ್ಪುಗೆಯಲಿ
ಎಲ್ಲವ ಮರೆತಿಹೆ ಪ್ರೀತಿಯಲಿ
ಮೌನವೆ ಬಯಸಿತು ಎಲ್ಲವನೂ
ತುಟಿಯಂಚಲಿ ಮರೆಯಾದ ಮಾತಿನಲಿ
ಇಂದು ನಾ ಒಂದು ತೀರಾ
ನೀ ತುಸು ದೂರ
ನಿನ್ನ ನೆನಪಲಿ ಈಗ
ಹಂಬಲಿಸುತ್ತಿರುವೆ
ಕನವರಿಸುತಿರುವೆ
ನೂರು ಭಾವಗಳಿರುವಸ್ವಾರ್ಥ ಇರದ ಕ್ಷಣಗಳೆ
ಕೊನೆಯಾಗಿ ಜೊತೆಯಾಗಿ ಇರಲಿ
ನನ್ನ ಪಯಣದ ಬಿಸಿಲಿಗೆ ನೆರಳಾಗಿ
ನಿದ್ದೆ ಬಾರದ ರಾತ್ರಿಗೆ ಕನಸಾಗಿ
ಉಳಿದು ಬಿಡಲಿ ಮಧುರ ಸವಿ
ಪೂರ್ಣ ಚಂದಿರ ನೀನಾಗುನಿನ್ನಯ ಮುದ್ದಾದ ಮೊಗಕ್ಕೆ
ಹಚ್ಚುವೆನು ನಕ್ಷತ್ರಗಳ ಬೆಳಕನು
ಕತ್ತಲು ಕವಿಯಲು ಬಿಡದಿರಲು
ನಿನ್ನಯ ಬಾಳಲಿ ಬೆಳಕಾಗುವೆನು
ಮೊಡದೊಳಗೆ ಅವಿತಿರಲು
ನಿನ್ನಯ ಮೊಗವನು ಕಾಣದೆ
ರೆಪ್ಪೆಯು ತುಂಬಿದೆ ಹನಿಗಳಲಿ
ಒಮ್ಮೆ ಇಳಿದು ಬಾ ಅಭಿಸಾರಿಕೆಯೆ
ನನ್ನಯ ಮನವಿಂದು ಹಾತೊರೆಯುತಿದೆ
ಬರಡಾದ ಒಣ ಭುವಿಯಂತೆ
ನಿನ್ನಯ ಹನಿ ಹನಿಯಲ್ಲೂನನ್ನಯ ಜೀವವೂ ಉಸಿರಾಡುತಿದೆ ಅಲೆದಾಡುತಿದೆ
ಜೊತೆ ಸೇರಲು ಬಯಸಿದೆ
ಇಳಿದು ಬಾ ಧರೆಗಿಳಿದು ಬಾ
ಒಂದಾಗುವ ಬಾ....
No comments:
Post a Comment